ಕೃಷ್ಣ ಕಾಂತ್ (28 ಫೆಬ್ರವರಿ 1927 – 27 ಜುಲೈ 2002) ಭಾರತದ ಉಪರಾಷ್ಟ್ರಪತಿಗಳಾಗಿದ್ದರು.ಇವರು ೧೯೯೭ರಿಂದ ತಮ್ಮ ನಿಧನದವರೆಗೂ ಉಪರಾಷ್ಟ್ರಪತಿಗಳಾಗಿದ್ದರು. ಇದಕ್ಕೆ ಮೊದಲು ಇವರು ೧೯೯೦ ರಿಂದ ೧೯೯೭ ರವರೆಗೆ ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿದ್ದರು. == ಶಿಕ್ಷಣ == ಕಾಂತ್ ರವರು ಎಂಎಸ್ಸಿ (ಟೆಕ್ನಾಲಜಿ) ಯನ್ನು ಬನಾರಸ್ ಎಂಜಿನಿಯರಿಂಗ್ ಕಾಲೇಜ್, ಬನಾರಸ್ ನಲ್ಲಿ ಪಡೆದರು. == ರಾಜಕೀಯ ವೃತ್ತಿಜೀವನ == ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರಾಗಿ ಭಾಗವಹಿಸಿದರು ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡರು, ಅವರು ಭಾರತದ ಸಂಸತ್ತಿಗೆ ಆಯ್ಕೆಯಾದರು. ಇಂದಿರಾ ಗಾಂಧಿಯ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ "ಯಂಗ್ ಟರ್ಕ್" ದಳದ ಭಾಗವಾಗಿದ್ದರು.ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2020-07-11 ವೇಬ್ಯಾಕ್ ಮೆಷಿನ್ ನಲ್ಲಿ., ಜನತಾ ಪಕ್ಷ ಮತ್ತು ಜನತಾ ದಳದ ಸಂಸದೀಯ ಮತ್ತು ಸಾಂಸ್ಥಿಕ ವಿಂಗ್ನ ಪ್ರಮುಖ ಅಧಿಕೃತ ಸ್ಥಾನಗಳನ್ನು ಹೊಂದಿದ್ದರು. ಅನೇಕ ವರ್ಷಗಳಿಂದ ಅವರು ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಮತ್ತು ವಿಶ್ಲೇಷಣೆ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದರು.ವಿ.ಪಿ.ಸಿಂಗ್ ಸರಕಾರ 1989 ರಲ್ಲಿ ಕಾಂತ್ ರವರನ್ನು ಆಂಧ್ರಪ್ರದೇಶದ ಗವರ್ನರ್ ಆಗಿ ಆಯ್ಕೆ ಮಾಡಿತು ,ಏಳು ವರ್ಷಗಳ ಕಾಲ ಆ ಸ್ಥಾನದಲ್ಲಿ ಸೇವೆ ಸಲ್ಲಿಸಿದರು . ನಂತರ ಅವರು ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==